ಸೇನಾ ಬಂಕರ್ ನೆಲಸಮ ಮಾಡಲು ಚೀನಾ ಬುಲ್ಡೋಜರ್ ಬಳಕೆ ಮಾಡಿಲ್ಲ: ಭಾರತ

0

ನವದೆಹಲಿ: ಸಿಕ್ಕಿಂನ ಭಾರತದ ಟ್ರೈ-ಜಂಕ್ಷನ್ ನಲ್ಲಿದ್ದ ಭಾರತೀಯ ಸೇನೆಯ ಹಳೆ ಬಂಕರ್ ಗಳನ್ನು ಚೀನಾ ಬುಲ್ಡೋಜರ್ ಬಳಸಿ ತೆರವುಗೊಳಿಸಲಾಗಿದೆ ಎಂಬ ವರದಿಯನ್ನು ಭಾರತ ತಳ್ಳಿಹಾಕಿದೆ.

ಚೀನಾ ಸೇನೆ ಬಂಕರ್ ಗಳನ್ನು ನೆಲಸಮಗೊಳಿಸುವುದಕ್ಕೆ ಬುಲ್ಡೋಜರ್ ಗಳನ್ನು ಬಳಕೆ ಮಾಡಿಕೊಂಡಿಲ್ಲ ಎಂದು ಭಾರತ ಹೇಳಿಕೆ ನೀಡಿದೆ. ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಿದ್ದು, ಚೀನಾ ಭಾರತದ ಬಂಕರ್ ಗಳನ್ನು ತೆರವುಗೊಳಿಸುವುದಕ್ಕೆ ಬುಲ್ಡೋಜರ್ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಆದರೆ ಈ ವರದಿಯನ್ನು ಭಾರತೀಯ ಸೇನೆಯ ವಕ್ತಾರರು ತಿರಸ್ಕರಿಸಿದ್ದು, ಬುಲ್ಡೋಜರ್ ಗಳನ್ನು ಬಳಕೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.
ಚಿನಾ-ಭಾರತದ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿಲ್ಲ. ನಮ್ಮ ನಡುವಿನ ಸಂಬಂಧಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ಭಾರತೀಯ ಸೇನಾ ವಕ್ತಾರರು ಹೇಳಿದ್ದಾರೆ.

Comments

comments

LEAVE A REPLY

Please enter your comment!
Please enter your name here