ಬಾರ್ ನವೀಕರಣ, ಸ್ಥಳಾಂತರದಲ್ಲಿ ಭ್ರಷ್ಟಾಚಾರ; ಎಸಿಬಿಗೆ ರವಿಕೃಷ್ಣಾ ರೆಡ್ಡಿ ದೂರು

0
ಬೆಂಗಳೂರು: ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬಾರ್ ಗಳು ಇರಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಹೆದ್ದಾರಿಗಳಲ್ಲಿ ಇನ್ನೂ ಅನೇಕ ಬಾರ್​ಗಳು ಕಾರ್ಯ ನಿರ್ವಹಿಸುತ್ತಿರುವಂತೆಯೇ ಬಾರ್ ನವೀಕರಣ, ಸ್ಥಳಾಂತರದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಎಸಿಬಿಗೆ ದೂರು ಸಲ್ಲಿಕೆ ಮಾಡಿದ್ದಾರೆ.ಮದ್ಯದಂಗಡಿಗಳ ಪರವಾನಗಿ ಸ್ಥಳಾಂತರ ಮತ್ತು ನವೀಕರಣ ನೆಪದಲ್ಲಿ ಅಧಿಕಾರಿಗಳು ಲಂಚ ವಸೂಲಿ ಮಾಡುತ್ತಿದ್ದು, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವ ಅನೇಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಅದಕ್ಕೆ ಯಾವ ಕಾರಣಗಳನ್ನೂ  ಅಧಿಕಾರಿಗಳು ನೀಡುತ್ತಿಲ್ಲ. ಕೇವಲ ಲಂಚ ನೀಡಲಿ ಎಂಬ ಉದ್ದೇಶದಿಂದ ಬಾರ್ ಮಾಲೀಕರಿಗೆ ಅಲೆದಾಡಿಸುತ್ತಿದ್ದಾರೆ ಎಂದು ರವಿಕೃಷ್ಣಾರೆಡ್ಡಿ ದೂರಿನಲ್ಲಿ ಆರೋಪಿಸಿದ್ದಾರೆ.ಅಂತೆಯೇ ರಾಜ್ಯದಲ್ಲಿ ಒಟ್ಟು 3515 ಬಾರ್​ಗಳ ನವೀಕರಣ ರದ್ದುಗೊಳಿಸಲಾಗಿದ್ದು, ನೈಜತೆ ಬಗ್ಗೆ ತಿಳಿಯಲು ತನಿಖೆ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಈ ಖಾತೆಯನ್ನು ನಿರ್ವಹಿಸುತ್ತಿದ್ದು,  ಜಿಲ್ಲಾಧಿಕಾರಿಗಳು, ಅಬಕಾರಿ ಅಧಿಕಾರಿಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ದೂರಿನ ಮಖಾಂತರ ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಹೆದ್ದಾರಿಗಳಲ್ಲಿ ಇನ್ನೂ ಅನೇಕ ಬಾರ್​ಗಳು ಕಾರ್ಯ ನಿರ್ವಹಿಸುತ್ತಿವೆ. ವರ್ಗಾವಣೆಗೊಳ್ಳಬೇಕಿರುವ ಬಾರ್​ಗಳ ಪೈಕಿ ಕೆಲವು ಸ್ಥಳ ಹುಡುಕುವ ನೆಪದಲ್ಲಿ ಕಾಲವಕಾಶ ಕೇಳಿದ್ದರೆ, ಮತ್ತೆ ಕೆಲವು  ಹೊಸ ವಿಳಾಸ ನೀಡಿಯೂ, ಹಳೇ ಪ್ರದೇಶದಲ್ಲೇ ವಹಿವಾಟು ನಡೆಸುತ್ತಿವೆ. ಇನ್ನೂ ಕೆಲವು ಬಾರ್​ಗಳು ತಂಬಾಕು ಪದಾರ್ಥಗಳಂತೆ ಸಣ್ಣ ಪುಟ್ಟ ಅಂಗಡಿಗಳ ಮೂಲಕ ಕದ್ದು ಮುಚ್ಚಿ ಮದ್ಯ ಮಾರಾಟದಲ್ಲಿ ತೊಡಗಿವೆ. ಮತ್ತೊಂದೆಡೆ  ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟದ ದೂರುಗಳು ಕೇಳಿ ಬರುತ್ತಿವೆ.

Comments

comments

LEAVE A REPLY

Please enter your comment!
Please enter your name here