ಪ್ರಧಾನಿ ಮೋದಿ ಅವರ ಐತಿಹಾಸಿಕ ಭೇಟಿಗೆ ಇಸ್ರೇಲ್ ಸಜ್ಜುಗೊಂಡಿದೆ: ನೇತನ್ಯಾಹು

0

ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಜು.4 ರಂದು ಇಸ್ರೇಲ್ ಗೆ ಭೇಟಿ ನೀಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಭೇಟಿಗೆ ಇಸ್ರೇಲ್ ಸಜ್ಜುಗೊಂಡಿದೆ ಎಂದು ಇಸ್ರೇಲ್ ನ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.
ಕಳೆದ 70 ವರ್ಷಗಳಲ್ಲಿ ಭಾರತದ ಪ್ರಧಾನಿಯಿಂದ ಇದೊಂದು ಐತಿಹಾಸಿಕ ಭೇಟಿಯಾಗಿದೆ ಎಂದು ನೇತನ್ಯಾಹು ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ನನ್ನ ಸ್ನೇಹಿತ ಎಂದು ಹೇಳಿರುವ ನೇತನ್ಯಾಹು ಪ್ರಧಾನಿ ಮೋದಿ ಅವರ ಭೇಟಿಯಿಂದ ಹಲವು ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಸಲಿದೆ ಇಸ್ರೇಲ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಜರ್ಮನಿಯ ಹಂಬರ್ಗ್ ಗೆ ತೆರಳಲಿದ್ದಾರೆ.

Comments

comments

LEAVE A REPLY

Please enter your comment!
Please enter your name here