ದಿವಾಳಿ ಹಂತ ತಲುಪಿದ ‘ಸ್ಪೈಸ್ ಗರ್ಲ್’ ಮೆಲ್ ಬಿ

0

ಲಂಡನ್, ಜುಲೈ 03: ಮಾಜಿ ಸ್ಪೈಸ್ ಗರ್ಲ್, ಪಾಪ್ ಗಾಯಕಿ ಮೆಲ್ ಬಿ ದಿವಾಳಿ ಹಂತ ತಲುಪಿದ್ದಾರೆ. ಆಕೆಯ ಬ್ಯಾಂಕ್ ಖಾತೆಯಲ್ಲಿ ಈಗ 961 ಪೌಂಡ್ ಮಾತ್ರ ಇದೆ. ವೃತ್ತಿ ಬದುಕಿನಿಂದ ಸಂಪಾದಿಸಿದ್ದ 50 ಮಿಲಿಯನ್ ಡಾಲರ್ ಹಣವನ್ನು ಮೋಜು ಮಸ್ತಿಗಾಗಿ ಖರ್ಚು ಮಾಡಿ ಕೈಖಾಲಿ ಮಾಡಿಕೊಂಡಿದ್ದಾರೆ. ಮೆಲ್ ಬಿ ಹಾಗೂ ಆಕೆಯ ಮಾಜಿ ಪತಿ ಸ್ಟೀಫನ್ ಬೆಲಾಫೊಂಟೆ ಮಧ್ಯೆ ಕಾನೂನು ಸಮರ ನಡೆಯುತ್ತಿದೆ. ಆತನ ವಿರುದ್ಧ ದೈಹಿಕ ಮತ್ತು ಮಾನಸಿಕ ಹಿಂಸೆ ಆರೋಪ ಹೊರಿಸಿ ಮೆಲ್ ಬಿ ಕೋರ್ಟ್ ಮೆಟ್ಟಿಲೇರಿದ್ದಾಳೆ. 2007ರಲ್ಲಿ ಸ್ಟೀಫನ್ ನನ್ನು ಮದುವೆಯಾಗಿದ್ದರು. ಸದ್ಯ ಇಬ್ಬರೂ ಬೇರೆ ಬೇರೆಯಾಗಿದ್ದಾರೆ.

ಕೋರ್ಟಿನಲ್ಲಿ ಈಕೆಯ ಐಷಾರಾಮಿ ಬದುಕು, ದುಂದುವೆಚ್ಚದ ಲೆಕ್ಕ ಬಹಿರಂಗವಾಗಿದೆ. ಸರಿ ಸುಮಾರು 323 ಕೋಟಿ ರು ಗಳನ್ನು ಖರ್ಚು ಮಾಡಿರುವ ಮೆಲ್ ಬಿ ಅಲಿಯಾಸ್ ಮೆಲಾನಿನ್ ಬಿ ಅವರ ಬ್ಯಾಂಕ್ ಖಾತೆಯಲ್ಲಿ ಸುಮಾರು 75,000 ರುಪಾಯಿ ಮಾತ್ರ ಇದೆ. 42 ವರ್ಷ ವರ್ಷದ ಗಾಯಕಿ ಮೆಲ್ ಬಿ ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ಕಾರ್ಯಕ್ರಮದ ತೀರ್ಪುಗಾರ್ತಿಯಾಗಿದ್ದು, ವರ್ಷಾಂತ್ಯಕ್ಕೆ ತೆರಿಗೆ ಕಟ್ಟಲು ಹಣ ಇಲ್ಲ ಎಂದು ಲಾಸ್ ಏಂಜಲೀಸ್ ಸೂಪರೀಯರ್ ಕೋರ್ಟಿಗೆ ಮೆಲ್ ಬಿ ಪರ ವಕೀಲರು ಹೇಳಿದ್ದಾರೆ. (ಐಎಎನ್ಎಸ್)

Comments

comments

LEAVE A REPLY

Please enter your comment!
Please enter your name here