ಜಿಯೋ ವಿರುದ್ಧ ಜಿದ್ದಿಗೆ ಬಿದ್ದ ಏರ್‌ಟೆಲ್ ಬೆಸ್ಟ್ ಯಾಕೆ..? ಉತ್ತರ ಇಲ್ಲಿದೆ

0

ದೇಶಿಯ ಟೆಲಿಕಾಂ ವಲಯದಲ್ಲಿ ಜಿಯೋ ಸೇವೆಯೂ ಆರಂಭವಾದ ನಂತರದಲ್ಲಿ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಸೇವೆಯ ಬೆಲೆಗಳನ್ನು ಇಳಿಕೆ ಮಾಡಿ ಆಕರ್ಷಕ ಆಫರ್ ಗಳನ್ನು ಘೋಷಣೆ ಮಾಡಿದ್ದವು, ಈ ಕಾರ್ಯದಲ್ಲಿ ಏರ್‌ಟೆಲ್ ಮುಂದೆ ಇತ್ತು ಎಂದರೆ ತಪ್ಪಾಗುವುದಿಲ್ಲ.

ಏರ್‌ಟೆಲ್ ಜಿಯೋಗೆ ಪ್ರಭಲ ಸ್ಪರ್ಧೆಯನ್ನು ನೀಡಲು ಮುಂದಾಗಿ, ಜಿಯೋ ಗಿಂತಲೂ ಉತ್ತಮ ಆಫರ್ ಗಳನ್ನು ನೀಡಬೇಕು ಎನ್ನುವ ಕಾರಣಕ್ಕೆ ಹಲವು ಆಫರ್ ಗಳನ್ನು ಗ್ರಾಹಕರಿಗೆ ನೀಡಿತ್ತು. ಈ ಹಿನ್ನಲೆಯಲ್ಲಿ ಇದುವರೆಗೂ ಏರ್‌ಟೆಲ್ ನೀಡಿರುವ ಬೆಸ್ಟ್ ಆಫರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಏರ್‌ಟೆಲ್ ರೂ.998 4G ಪ್ಲಾನ್: ಏರ್‌ಟೆಲ್ ನೀಡಿದ್ದ ರೂ.998 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 2.5GB ಡೇಟಾವನ್ನು ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು 28 ದಿನಗಳ ಅವಧಿಗೆ ನೀಡಿತ್ತು. ಈ ಆಫರ್ ಕೇವಲ 4G ಹ್ಯಾಂಡ್ ಸೆಟ್ ಮತ್ತು 4G ಸಿಮ್ ಹೊಂದಿರುವವರಿಗೆ ಮಾತ್ರವೇ ಲಭ್ಯವಿತ್ತು.

ಏರ್‌ಟೆಲ್ ರೂ.1198 4G ಪ್ಲಾನ್: 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದ ಈ ಪ್ಲಾನ್ ನಲ್ಲಿ ಬಳಕೆದಾರರಿಗೆ 2.5GB ಡೇಟಾವು ಪ್ರತಿದಿನ ಬಳಕೆಗೆ ನೀಡಲಾಗುತ್ತಿತ್ತು. ಇದರೊಂದಿಗೆ ಅನ್‌ಲಿಮಿಟೆಡ್ ಲೋಕಲ್, STD ಮತ್ತು ರೋಮಿಂಗ್ ಕಾಲ್ ಮಾಡುವ ಅವಕಾಶವನ್ನು ನೀಡಿತ್ತು.

ಏರ್‌ಟೆಲ್ ರೂ.498 4G ಪ್ಲಾನ್: ಈ ಆಫರ್ ಕೇವಲ ಡೇಟಾ ಬೆನಿಫಿಟ್ ನೀಡುವ ಆಫರ್ ಆಗಿದ್ದು, ಇದರಲ್ಲಿ ಯಾವುದೇ ವಾಯ್ಸ್ ಕಾಲಿಂಗ್ ಮಾಡುವ ಅವಕಾಶವು ಇರಲಿಲ್ಲ. ಏರ್‌ಟೆಲ್ 10GB 3G/4G ಡೇಟಾ ವನ್ನು ನೀಡುತ್ತಿತು. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು.

ಏರ್‌ಟೆಲ್ ರೂ.99 4G ಪ್ಲಾನ್: ಏರ್‌ಟೆಲ್ ಈ ಹಿಂದೆ ರೂ.255ಕ್ಕೆ 1GB ಡೇಟಾವನ್ನು ನೀಡುತ್ತಿತು. ಆದರೆ ಜಿಯೋ ಸೇವೆಯನ್ನು ನೀಡಿದ ಮೇಲೆ ರೂ.99ಕ್ಕೆ 1GB ಡೇಟಾವನ್ನು ನೀಡಲು ಮುಂದಾಯಿತು. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್‌ಟೆಲ್ ರೂ.96 4G ಪ್ಲಾನ್: ಏರ್‌ಟೆಲ್ ರೂ.96ಕ್ಕೆ ಎರಡು ದಿನದ ವ್ಯಾಲಿಡಿಟಿಗೆ 2GB ಡೇಟಾವನ್ನು ನೀಡಲು ಮುಂದಾಗಿತ್ತು, ಆದರೆ ಈ ಕೊಡುಗೆ ಕೇವಲ ಕೆಲವೇ ಮಂದಿಗೆ ಲಭ್ಯವಿತ್ತು.

ಏರ್‌ಟೆಲ್ ರೂ.149 ಮತ್ತು ರೂ.349 ಪ್ಲಾನ್: ಏರ್‌ಟೆಲ್ ಜಿಯೋಗೆ ಸ್ಪರ್ಧೆ ನೀಡುವ ಸಲುವಾಗಿ ಬಿಡುಗಡೆ ಮಾಡಿದ ಆಫರ್ ಇದಾಗಿದೆ. ಇದರಲ್ಲಿ ರೂ. 149ಕ್ಕೆ ಅನ್‌ಲಿಮಿಟೆಡ್ ಏರ್‌ಟೆಲ್ ಟು ಏರ್‌ಟೆಲ್ ಕರೆ ಮಾಡುವ ಅವಕಾಶ ಮತ್ತು 2GB ಡೇಟಾವನ್ನು 28 ದಿನಗಳ ಅವಧಿಗೆ ನೀಡಿತ್ತು. ಅದೇ ಮಾದರಿಯಲ್ಲಿ ರೂ.349 ಆಫರ್ ನಲ್ಲಿ ಪ್ರತಿ ನಿತ್ಯ 2GB 4G ಡೇಟಾವನ್ನು 28 ದಿನಗಳ ಅವಧಿಗೆ ನೀಡುತ್ತಿತ್ತು.

Comments

comments

LEAVE A REPLY

Please enter your comment!
Please enter your name here