ಜಿಎಸ್ ಟಿ ತೆರಿಗೆ ವ್ಯವಸ್ಥೆಯಿಂದ ದೇಶಕ್ಕೆ 2,300 ಕೋಟಿ ರು. ಉಳಿತಾಯ

0

ನವದೆಹಲಿ: ಇದೇ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬಂದಿಕುವ ಏಕರೂಪ ತೆರಿಗೆ ವ್ಯವಸ್ಥೆ ಜಿಎಸ್ ಟಿ ಯಿಂದಾಗಿ ದೇಶಕ್ಕೆ ಬರೊಬ್ಬರಿ 2300 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯಿಂದಾಗಿ ಸಾರಿಗೆ ವಿಭಾಗದಲ್ಲಿ ದೇಶದ ಆರ್ಥಿಕತೆಗೆ 2300 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಜಿಎಸ್​ಟಿ ಜಾರಿಗಿಂತ ಮೊದಲು ಅಂತರ್ ರಾಜ್ಯ ತೆರಿಗೆ ವ್ಯವಸ್ಥೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯದ ಚೆಕ್​ಪೋಸ್ಟ್​ಗಳಲ್ಲಿ ಲಾರಿಗಳು ಹೆಚ್ಚು ಹೊತ್ತು ನಿಂತು ಸಾಗುತ್ತಿದ್ದವು. ಇದರಿಂದ ಸಮಯ ಮತ್ತು ಇಂಧನ ವ್ಯಯವಾಗುತ್ತಿತ್ತು.

ಆದರೆ ಜಿಎಸ್​ಟಿ ಜಾರಿಯಿಂದ ರಾಜ್ಯ ಚೆಕ್​ಪೋಸ್ಟ್​ಗಳನ್ನು ಮುಚ್ಚಲಾಗಿದ್ದು, ಪ್ರತಿ ವರ್ಷ ಪರೋಕ್ಷವಾಗಿ ಉಂಟಾಗುತ್ತಿದ್ದ ಇಂಧನ ನಷ್ಟಕ್ಕೆ ತಡೆ ಬೀಳಲಿದೆ. ಚೆಕ್​ಪೋಸ್ಟ್​ಗಳಲ್ಲಿ ಲಾರಿಗಳ ತಪಾಸಣೆ ವಿಳಂಬದಿಂದ ಭಾರತದ ಆರ್ಥಿಕತೆಗೆ ಪರೋಕ್ಷವಾಗಿ 900-2300 ಕೋಟಿ ರು. ನಷ್ಟ ಉಂಟಾಗುತ್ತಿದೆ ಎಂದು 2005ರ ವಿಶ್ವಬ್ಯಾಂಕ್ ವರದಿ ತಿಳಿಸಿತ್ತು.

ಆದರೆ ಜಿಎಸ್​ಟಿ ಜಾರಿಗೊಂಡ ತಕ್ಷಣದಿಂದಲೇ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಗಡಿ ಚೆಕ್​ಪೋಸ್ಟ್ ಗಳನ್ನು ಮುಚ್ಚಿದ್ದು, ಇತರೆ ರಾಜ್ಯಗಳೂ ಕೂಡ ಶೀಘ್ರದಲ್ಲೇ ಇದೇ ಮಾರ್ಗ ಅನುಸರಿಸುವ ಸಾಧ್ಯತೆ
ಇದ್ದು, ಸರಕು ಸಾಗಾಣಿಕಾ ವಾಹನಗಳು ತಡೆಯಿಲ್ಲದೇ ಚಲಿಸಬಹುದಾಗಿದೆ. ಇದರಿಂದ ದೇಶಕ್ಕೆ 2300 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ನೂತನ ತೆರಿಗೆ ವ್ಯವಸ್ಥೆಯಿಂದಾಗಿ ಇ-ವೇ ಬಿಲ್ ಸೌಲಭ್ಯ ಚಾಲ್ತಿಯಲ್ಲಿದ್ದು, ಈ ರೀತಿಯ ಬಿಲ್ ಗಳು 1 ರಿಂದ 15 ದಿನಗಳ ಅವಧಿಯ ಮಾನ್ಯತೆ ಹೊಂದಿರುತ್ತವೆ. ಈ ಬಿಲ್ ಗಳೊಂದಿಗೆ ದಿನಕ್ಕೆ 100 ಕಿ.ಮೀ ನಂತೆ ಚಲಿಸಿದರೂ 15 ದಿನಕ್ಕೆ 1 ಸಾವಿರ ಕಿ.ಮೀ ದೂರದ ಪ್ರಯಾಣ ಮಾಡಬಹುದು. ತೆರಿಗೆ ಅಧಿಕಾರಿಗಳು ಇ-ವೇ ಬಿಲ್ ಗಳ ಮೂಲಕ ಸರಕು-ಸಾಗಾಣಿಕಾ ವಾಹನಗಳನ್ನು ಪರೀಕ್ಷಿಸಬಹುದಾಗಿದೆ. ಇ-ವೇ ಬಿಲ್ ಗಾಗಿ ಸಂಸ್ಥೆಗಳು ಆನ್ ಲೈನ್ ನಲ್ಲಿ ತಮ್ಮ ತಮ್ಮ ಸಂಸ್ಥೆಗಳ ನೋಂದಣಿ ಮಾಡಿಸಿಕೊಳ್ಳಬೇಕಿರುತ್ತದೆ ಎಂದು ಕಂದಾಯ ಕಾರ್ಯದರ್ಶಿ ಹಾಸ್ಮುಖ್ ಆದಿಯಾ ತಿಳಿಸಿದ್ದಾರೆ.

Comments

comments

LEAVE A REPLY

Please enter your comment!
Please enter your name here