ಗಣೇಶ್ ಮತ್ತು ರಶ್ಮಿಕಾ ‘ಚಮಕ್’ ಬೈಕ್ ಸವಾರಿ

0
ಬೆಂಗಳೂರು: ಬೆಂಗಳೂರಿನಿಂಗ ಮೇಲುಕೋಟೆಗೆ ಮತ್ತು ಅಲ್ಲಿಂದ ವಾಪಸ್ ಬೈಕ್ ಸವಾರಿ ಮಾಡಿದ್ದಾರೆ ನಟ ಗಣೇಶ್ ಮತ್ತು ನಟಿ ರಶ್ಮಿಕಾ ಮಂದಣ್ಣ. ಈ ಬೈಕ್ ಸವಾರಿಯಲ್ಲಿ ೨೦೦ ಕ್ಕೂ ಹೆಚ್ಚು ಉತ್ಸಾಹಿ ಬೈಕ್ ಸವಾರರು ಪಾಲ್ಗೊಂಡಿದ್ದು ವಿಶೇಷ.
ಇದು ಅವರ ಮುಂದಿನ ಸಿನೆಮಾ ‘ಚಮಕ್’ನ ಹಾಡಿನ ಚಿತ್ರೀಕರಣದ ಭಾಗವಾಗಿತ್ತಂತೆ. ಈ ಸಿನೆಮಾದಲ್ಲಿ ಗಣೇಶ್ ಪ್ರಸೂತಿ ವೈದ್ಯ ತಜ್ಞನ ಪಾತ್ರವಹಿಸಿದ್ದಾರೆ.
ವೈದ್ಯರಿಗೂ ಬೈಕ್ ಸವಾರಿಗೂ ಎತ್ತಣ ಸಂಬಂಧ ಎಂದು ಪ್ರಶ್ನಿಸಿದರೆ “ಡಾ. ಗಣೇಶ್ ಅವರಿಗೆ ಬೈಕ್ ಮೇಲೆ ಮೋಹ ಮತ್ತು ಅವರ ಹವ್ಯಾಸ ಕೂಡ ಅದು. ಅವರ ಬಳಿ ಎರಡು ದೊಡ್ಡ ರಾಯಲ್ ಎನ್ ಫೀಲ್ಡ್ ಬೈಕ್ ಗಳಿವೆ” ಎನ್ನುತ್ತಾರೆ ನಿರ್ದೇಶಕ ಸುನಿ.
ಈ ದೃಶ್ಯ ಚಿತ್ರೀಕರಣದ ವೇಳೆ ಸುನಿ ಹಲವು ಉತ್ಸಾಹಿ ಬೈಕ್ ಸವಾರ ತರುಣರನ್ನು ಇದರ ಭಾಗವಾಗಲು ಆಹ್ವಾನಿಸಿದ್ದರು. “ಈ ಸವಾರಿ ಸಿನೆಮಾಗೆ ಹೇಗೆ ಸಂಬಂಧಿಸಿದೆ ಎಂದು ಪ್ರೇಕ್ಷಕರು ಕಂಡುಹಿಡಿಯಬೇಕು” ಎನ್ನುತ್ತಾರೆ ಸುನಿ.
ಬೆಳಗ್ಗೆ ೬ ಘಂಟೆಗೆ ಪ್ರಾರಂಭವಾದ ಬೈಕ್ ಸವಾರಿ ಚಿತ್ರೀಕರಣ ಇಡೀ ದಿನ ಹಿಂಡಿಯಿತಂತೆ. “ನಿರ್ದೇಶಕನಾಗಿ ಬೈಕ್ ಸವಾರಿಯನ್ನು ಸೆರೆ ಹಿಡಿಯುವುದು ವಿಭಿನ್ನ ಅನುಭವವಾಗಿತ್ತು” ಎನ್ನುವ ಸುನಿ “ಇದಕ್ಕಾಗಿ ವಿಶೇಷ ಕ್ಯಾಮರಾಗಳನ್ನು ಬಳಸಿದೆವು” ಎಂದು ತಿಳಿಸುತ್ತಾರೆ.

Comments

comments

LEAVE A REPLY

Please enter your comment!
Please enter your name here