ಕಾಂಗ್ರೆಸ್ ನಿರಂತರವಾಗಿ ಭಾರತೀಯ ಸೇನೆಯನ್ನು ಅವಮಾನಿಸುತ್ತಿದೆ: ಪ್ರಕಾಶ್ ಜವಡೇಕರ್

0

ನವದೆಹಲಿ: ಭಾರತ-ಚೀನಾ ಗಡಿ ವಿವಾದ ಸಂಬಂಧ ಸೇನೆ ಕುರಿತು ಕಾಂಗ್ರೆಸ್ ನೀಡಿದ್ದ ಹೇಳಿಕೆ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಿರಂತರವಾಗಿ ಭಾರತೀಯ ಸೇನೆಯನ್ನು ಅವಮಾನಿಸುತ್ತಿದೆ. ಭಾರತ ಮತ್ತು ಚೀನಾ ಗಡಿಯಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧ ವಾತಾವರಣ ಕುರಿತಂತೆ ಇದೀಗ ಕಾಂಗ್ರೆಸ್ ಪ್ರಶ್ನೆ ಎತ್ತಿದೆ. ಈ ಹಿಂದೆ ಸೇನೆ ನಡೆಸಿದ್ದ ಸೀಮಿತ ದಾಳಿ ಕುರಿತಂತೆಯೂ ಪ್ರಶ್ನೆಯೆತ್ತಿತ್ತು. ಕಾಂಗ್ರೆಸ್’ನ ಈ ವರ್ತನೆ ಸೇನೆಗೆ ಅವಮಾನ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಇಂಡೋ-ಚೀನಾ ಗಡಿಯಲ್ಲಿ ಭಾರತೀಯ ಸೇನೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸ್ ಸೇನೆಯನ್ನು ಅವಮಾನಿಸುತ್ತಿದೆ. 50 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದ ಪಕ್ಷದ ಕಡೆಯಿಂದ ಈ ರೀತಿಯ ಹೇಳಿಕೆ ಬರುತ್ತಿರುವುದು ಸರಿಯಲ್ಲ. ವಿದೇಶಾಂಗ ನೀತಿ ಹಾಗೂ ರಕ್ಷಣಾ ನೀತಿಗಳ ಕುರಿತಂತೆ ರಾಜಕೀಯ ಮಾಡವುದನ್ನು ಕಾಂಗ್ರೆಸ್ ನಿಲ್ಲಿಸಬೇಕು.

ಕಾಂಗ್ರೆಸ್’ನ ಈ ರೀತಿಯ ವರ್ತನೆಯನ್ನು ಪ್ರತೀಯೊಬ್ಬರೂ ಖಂಡಿಸಬೇಕು ಎಂದು ತಿಳಿಸಿದ್ದಾರೆ. ಇಂಡೋ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣದ ಮೂಲಕ ಮೋದಿ ಸರ್ಕಾರ ಸಿಕ್ಕಿಬಿದ್ದಿದೆ ಎಂದು ಈ ಹಿಂದೆ ಕಾಂಗ್ರೆಸ್ ಹೇಳಿತ್ತು.

Comments

comments

LEAVE A REPLY

Please enter your comment!
Please enter your name here