ಕಂಬಳಕ್ಕೆ ಹಸಿರು ನಿಶಾನೆ: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಸಹಿ

0

ನವದೆಹಲಿ: ಕರ್ನಾಟಕ ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ನೀಡಲು ಪ್ರಾಣಿ ಹಿಂಸೆ ತಡೆ ಕಾಯ್ದೆ 1960ಕ್ಕೆ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಂಕಿತ ಹಾಕುವ ಮೂಲಕ ಸೋಮವಾರ ಹಸಿರು ನಿಶಾನೆ ತೋರಿದ್ದಾರೆ.

ಪ್ರಾಣಿ ಹಿಂಸೆಯ ಕಾರಣ ನೀಡಿ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಇದೇ ಮಾನದಂಡವನ್ನು ಅನ್ವಯಿಸಿ ರಾಜ್ಯದ ಕಂಬಳ ಕ್ರೀಡೆಗೂ ನಿಷೇಧದ ಬಿಸಿ ತಟ್ಟಿತ್ತು.
ಬಳಿಕ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಗೆ ಮಾನ್ಯತೆ ನೀಡಲು ಕಾನೂನು ಮೊರೆ ಹೋಗಿತ್ತು. ಅದೇ ರೀತಿ ಕರ್ನಾಟಕ ಕೂಡ ಜನರ ಹೋರಾಟಕ್ಕೆ ಮಣಿದು ಕಂಬಳಕ್ಕೆ ಅವಕಾಶ ನೀಡುವ ಕಾಯ್ದೆಗೆ ತಿದ್ದುಪಡಿ ತರಲು ಜ.28ಕ್ಕೆ ಒಪ್ಪಿಗೆ ನೀಡಿತ್ತು. ಬಳಿಕ ಫೆಬ್ರವರಿ. 13ಕ್ಕೆ ಕರ್ನಾಟಕ ವಿಧಾನಮಂಡಲ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ನೀಡಿ, ರಾಜ್ಯಪಾಲಕ ಅಂತಿಕಕ್ಕೆ ಕಳುಹಿಸಿತ್ತು. ಆಧರೆ, ರಾಜ್ಯಪಾಲರು ಕಾಯ್ದೆಗೆ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿಕೊಟ್ಟಿದ್ದರು.

ರಾಷ್ಟ್ರಪತಿಗಳು ಈ ವಿಧೇಯಕದಲ್ಲಿನ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಬಯಸಿ ವಾಪಸ್ಸು ಕಳಿಸಿದ್ದರು. ಹೀಗಾಗಿ ಮೇ.5 ರಂದು ನಡೆದ ಸಚಿವ ಸಂಪುಟದಲ್ಲಿ ರಾಷ್ಟ್ರಪತಿಗಳು ಅಕ್ಷೇಪ ಎತ್ತಿದ ಅಂಶಗಳನ್ನು ತಿದ್ದುಪಡಿ ಮಾಡಿ, ಸುಗ್ರೀವಾಜ್ಞೆ ರೂಪದಲ್ಲಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು. ಸೋಮವಾರ ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು, ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ಕಂಬಳಕ್ಕೆ ಬಿದ್ದಿದ್ದ ನಿಷೇಧದ ತೂಗುಕತ್ತಿ ಬದಿಗೆ ಸರಿದಿದೆ.

Comments

comments

LEAVE A REPLY

Please enter your comment!
Please enter your name here