2019ರಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಆಕಾಂಕ್ಷೆ ಇಲ್ಲ: ನಿತೀಶ್ ಕುಮಾರ್

0
ನವದೆಹಲಿ: ಪ್ರಧಾನಮಂತ್ರಿ ಗದ್ದುಗೆಗೇರುವ ಸಾಮರ್ಥ್ಯ ನನಗಿಲ್ಲ. 2019ನೇ ಸಾಲಿನ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ನಿಲ್ಲಲು ನನಗೆ ಆಸಕ್ತಿಯೂ ಇಲ್ಲ ಎಂದು ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತ ಪ್ರತಿಕ್ರಿಯೆ ನೀಡಿರುವ ಅವರು, ವಿರೋಧ ಪಕ್ಷಗಳ ಬಳಿ ಇದೀಗ ಯಾವುದೇ ರೀತಿಯ ಅಜೆಂಡಾಗಳಿಲ್ಲ. ಹೀಗಾಗಿ ಈ ರೀತಿಯ ಹೊಸ ಆಜೆಂಡಾಗಳನ್ನು ಹುಟ್ಟುಹಾಕುತ್ತಿದ್ದಾರೆ. ಪ್ರಧಾನಮಂತ್ರಿ ಚುನಾವಣೆಯಲ್ಲಿ ನಾನು ನಿಲ್ಲುತ್ತಿಲ್ಲ ಎಂದು ಈ ಹಿಂದೆಯೇ ನಾನು ಸ್ಪಷ್ಟನೆ ನೀಡಿದ್ದೆ. ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷವಾಗಿದ್ದು, ತಂತ್ರಗಳನ್ನು ರೂಪಿಸುವುದೇ ಅದರ ಕೆಲಸವಾಗಿದೆ. ಕಾಂಗ್ರೆಸ್’ನ ಪ್ರತಿಕ್ರಿಯಾತ್ಮಕ ಅಜೆಂಡಾವನ್ನು ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ ಪ್ರತಿಕ್ರಿಯಾತ್ಮಕ ಅಜೆಂಡಾವನ್ನು ಬಿಟ್ಟು, ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ ಎಂದು ಹೇಳಿದ್ದಾರೆ.
2019ನೇ ಸಾಲಿನ ಪ್ರಧಾನಮಂತ್ರಿ ಚುನಾವಣಾ ಕಣದಲ್ಲಿ ನಾನು ನಿಲ್ಲುತ್ತಿಲ್ಲ. ಪ್ರಧಾನಮಂತ್ರಿಯಾಗುವ ಸಾಮರ್ಥ್ಯ ನನಗಿಲ್ಲ. ಪ್ರಧಾನಮಂತ್ರಿ ಅಭ್ಯರ್ಥಿ ಸ್ಥಾನದಲ್ಲಿ ನಿಲ್ಲುವ ಯಾವುದೇ ಆಕಾಂಕ್ಷೆಗಳೂ ನನಗಿಲ್ಲ. ನಮ್ಮದು ಸಣ್ಣ ಪಕ್ಷವಾಗಿದ್ದು, ಅಂತಹ ಆಕಾಂಕ್ಷೆಗಳನ್ನು ಇಟ್ಟುಕೊಳ್ಳಬಾರದು ಎಂದಿ ತಿಳಿಸಿದ್ದಾರೆ.
ಬಿಹಾರದ ರಾಜ್ಯದ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳ ಕುರಿತಂತೆ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಮೈತ್ರಿಕೂಟಲ್ಲಿ ಯಾವುದೇ ಬಿರುಕುಗಳು ಮೂಡಿಲ್ಲ. ಈಗಲೂ ಮೈತ್ರಿಕೂಟ ಶಕ್ತಿಶಾಲಿಯಾಗಿದೆ ಎಂದಿದ್ದಾರೆ.
ಇದೇ ವೇಳೆ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್’ಟಿ) ವ್ಯವಸ್ಥೆ ಜಾರಿಗೆ ತರಲು ನಡೆಸಲಾದ ವಿಶೇಷ ಅಧಿವೇಶನದಲ್ಲಿ ಗೈರುಹಾಜರಾಗಿರುವುದಕ್ಕೆ ಸ್ಪಷ್ಟನೆ ನೀಡಿದ ಅವರು, ವಿಶೇಷ ಅಧಿವೇಶನಕ್ಕೆ ಆಗಮಿಸಲು ನನಗೆ ಆಹ್ವಾನವನ್ನೇ ನೀಡಿರಲಿಲ್ಲ. ಹೀಗಾಗಿ, ಅಧಿವೇಶನಕ್ಕೆ ನಾನೇಕೆ ಹೋಗಲಿಲ್ಲ ಎಂಬ ಪ್ರಶ್ನೆಯೇ ಬರುವುದಿಲ್ಲ.
ಜಿಎಸ್ ಟಿಗೆ ನಾವು ಈ ಹಿಂದೆಯೇ ಬೆಂಬಲ ವ್ಯಕ್ತಪಡಿಸಿದ್ದೆವು. ಜಿಎಸ್ ಟಿ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲಿದೆ. ಇದೊಂದು ಬದಲಾದ ವ್ಯವಸ್ಥೆ. ಸಣ್ಣ ಪುಟ್ಟ ಸಮಸ್ಯೆಗಳು ಬಗೆಹರಿಯಲಿದೆ. ಆಹ್ವಾನವೇ ಇಲ್ಲ ಎಂದಾದ ಮೇಲೆ ಅಧಿವೇಶನಕ್ಕೇಕೆ ಹೋಗಲಿಲ್ಲ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳ ನಡುವೆ ಬಿರುಕು ಮೂಡಿರುವುದಕ್ಕೆ ಕಾಂಗ್ರೆಸ್ ಮುಖ್ಯ ಕಾರಣವಾಗಿದೆ ಎಂದಿದ್ದರು. ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಅವರಿಗೆ ಅವರದ್ದೇ ಆದ ದಾರಿ ಹಾಗೂ ಆಲೋಚನೆಗಳಿವೆ. 2019 ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಒಂದು ವಿರೋಧ ಪಕ್ಷವಾಗಿ ಕಾಂಗ್ರೆಸ್ ಪ್ರತಿಕ್ರಿಯಿಸುವ ರಾಜಕಾರಣ ಮಾಡಬೇಕಿತ್ತು. ಆದರೆ, ಅದು ಕ್ರಿಯಾಶೀಲತೆಯನ್ನೇ ಮರೆತಿದೆ ಎಂದಿದ್ದಾರೆ.

Comments

comments

LEAVE A REPLY

Please enter your comment!
Please enter your name here