ನಿಮ್ಮ ದಾಖಲೆಗಳ ಪೊಲೀಸ್ ಪರಿಶೀಲನೆಗೆ ಕೇವಲ 12 ದಿನ ಸಾಕು

0
ಬೆಂಗಳೂರು: ನಿಮ್ಮ ದಾಖಲೆಗಳ ಪೊಲೀಸ್ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂದು ನೋಡಲು ನೀವು ಇನ್ನು ಮುಂದೆ ಪೊಲೀಸ್ ಠಾಣೆ ಅಥವಾ ಆಯುಕ್ತರ ಕಚೇರಿಗೆ ಆಗಾಗ ಅಲೆಯಬೇಕೆಂದಿಲ್ಲ. ಬೆಂಗಳೂರು ನಗರ ಪೊಲೀಸ್ ಇಲಾಖೆ ಇದೀಗ ಪರಿಶೀಲನಾ ಪ್ರಕ್ರಿಯೆಯನ್ನು ತ್ವರೆಗೊಳಿಸಲು ಫಿಫೊ(ಮೊದಲಿಗೆ ಮೊದಲ ಬಾರಿಗೆ) ವನ್ನು ಜಾರಿಗೆ ತಂದಿದೆ.
ಆಯುಕ್ತರ ಕಚೇರಿಯಲ್ಲಿರುವ ಏಕ ದ್ವಾರ ವ್ಯವಸ್ಥೆಯನ್ನು ಪರಿಷ್ಕರಿಸಿದ್ದು, ಇಲ್ಲಿ ಅರ್ಜಿದಾರರು ಬಂದು ಅರ್ಜಿಗಳನ್ನು ಭರ್ತಿ ಮಾಡಿ ಹಾಕಬಹುದು. ಸಂದೇಶ ಸ್ವೀಕರಿಸಿದ ನಂತರ ಪೊಲೀಸ್ ಪರಿಶೀಲನೆ ಪ್ರಮಾಣಪತ್ರವನ್ನು ಸಂಗ್ರಹಿಸಬಹುದು. ಈ ಹಿಂದೆಯಾದರೆ ಸಾರ್ವಜನಿಕರು  ತಮ್ಮ ದಾಖಲೆಗಳನ್ನು ಪರಿಶೀಲಿಸಲಾಗಿದೆಯೇ ಎಂದು ನೋಡಲು ಆಯುಕ್ತರ ಕಚೇರಿಗೆ ಅಲೆಯಬೇಕಾಗುತ್ತಿತ್ತು.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಇಡೀ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸಿ ಕೆಲಸ ಸಂಪೂರ್ಣ ಮುಗಿದ ನಂತರ ಅರ್ಜಿದಾರರಿಗೆ ಸಂದೇಶ ಬರುತ್ತದೆ. ಈ ಕೆಲಸ ಮುಗಿಸಲು ನಾವು 12 ದಿನಗಳ ಸಮಯ ತೆಗೆದುಕೊಂಡಿದ್ದೇವೆ. ಹಿಂದೆಯಾದರೆ ಜನರು ಉದ್ದನೆ ಸಾಲಿನಲ್ಲಿ ನಿಂತು ಟೋಕನ್ ತೆಗೆದುಕೊಂಡು ತಮ್ಮ ಸರದಿ ಬರಲು ಕಾಯಬೇಕಾಗುತ್ತಿತ್ತು.
ಈ ಕುರಿತು ನಿನ್ನೆ ಟ್ವೀಟ್ ಮಾಡಿದ್ದ ಪ್ರವೀಣ್ ಸೂದ್, ಪಾಸ್ ಪೋರ್ಟ್ ಹೊರತುಪಡಿಸಿ ಪೊಲೀಸ್ ಪರಿಶೀಲನೆಗಳ ಪ್ರಮುಖ ಕೂಲಂಕಷ ಪರೀಕ್ಷೆಯನ್ನು ನಿರೀಕ್ಷಿಸಿ. ಸರದಿ ಸಾಲಿನಲ್ಲಿ ನಿಲ್ಲದೆ ಟೋಕನ್ ಇಲ್ಲದೆ ಫಿಫೊ ವ್ಯವಸ್ಥೆಯ ಅವಶ್ಯಕತೆಯಿರುವುದಿಲ್ಲ. ಪಾಸ್ ಪೋರ್ಟ್ ಪರಿಶೀಲನೆ ಕೇವಲ 21 ದಿನಗಳಲ್ಲು ಮುಕ್ತಾಯವಾಗುತ್ತದೆ.
ಮಾರ್ಗಸೂಚಿ ಪ್ರಕಾರ,ಕಾಲಾವಧಿಯ ಚೌಕಟ್ಟಿನಲ್ಲಿ ಪಾಸ್ ಪೋರ್ಟ್ ನ್ನು 21 ದಿನಗಳಲ್ಲಿ ಪರಿಶೀಲಿಸಲಾಗುವುದು. ಆದರೆ ಪ್ರಸ್ತುತ ಬೆಂಗಳೂರು ನಗರದಲ್ಲಿ 12 ದಿನಗಳಲ್ಲಿ ಸರಿಸುಮಾರು 90 ಕೇಸುಗಳನ್ನು ಪರಿಶೀಲಿಸಲಾಗುತ್ತದೆ. ಅದನ್ನು ಶೇಕಡಾ 100ಕ್ಕೆ ತಲುಪಿಸಬೇಕು.

Comments

comments

LEAVE A REPLY

Please enter your comment!
Please enter your name here