ವೇತನ ಬಿಕ್ಕಟ್ಟು: ಆಸ್ಟ್ರೇಲಿಯಾದ 200ಕ್ಕೂ ಹೆಚ್ಚು ಕ್ರಿಕೆಟಿಗರು ಇದೀಗ ನಿರುದ್ಯೋಗಿಗಳು!

0
ಸಿಡ್ನಿ: ಆಸ್ಟ್ರೇಲಿಯಾ ಆಟಗಾರರು ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಡುವಿನ ವೇತನ ಬಿಕ್ಕಟ್ಟು ಅಂತಿಮ ಹಂತಕ್ಕೆ ಬಂದು ತಲುಪಿದೆ. ಆಸೀಸ್ ಆಟಗಾರರು ಒಪ್ಪಂದಕ್ಕೆ ಸಹಿ ಹಾಕದಿರುವ ಕಾರಣ ಅವರೆಲ್ಲರ ಗುತ್ತಿಗೆ ಅವಧಿ ಅಂತ್ಯಗೊಂಡಿದ್ದು 200ಕ್ಕೂ ಹೆಚ್ಚು ಆಟಗಾರರು ನಿರುದ್ಯೋಗಿಗಳಾಗಿದ್ದಾರೆ.
ಟೆಸ್ಟ್ ತಂಡದ ಆಟಗಾರರು ಸೇರಿದಂತೆ 200ಕ್ಕೂ ಹೆಚ್ಚು ಆಟಗಾರರ ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವುದರಿಂದ ಜುಲೈ 1ರಿಂದ ಆ ಆಟಗಾರರು ನಿರುದ್ಯೋಗಿಗಳಾಗಿದ್ದಾರೆ. ಕಳೆದೆರೆಡು ದಶಕಗಳಿಂದ ಇದ್ದ ಹಣಕಾಸು ಹಂಚಿಕೆ ಮಾದರಿ ಪ್ರಕಾರ ಆಟಗಾರರಿಗೆ ಶೇ.25ರಷ್ಟು ಆದಾಯವನ್ನು ಕ್ರಿಕೆಟ್ ಮಂಡಳಿ ಮೀಸಲಿಡುತ್ತಿತ್ತು. ಆದರೆ ಈ ಹಣವನ್ನು ಇನ್ನೂ ಸಮರ್ಪಕವಾಗಿ ಬಳಸುವ ಉದ್ದೇಶದಿಂದಾಗಿ ಕ್ರಿಕೆಟ್ ಮಂಡಳಿ ಚಾಲ್ತಿಯಲ್ಲಿದ್ದ ಮಾದರಿಯನ್ನು ಮೊಟಕುಗೊಳಿಸಿ ನೂತನ ಮಾದರಿಯನ್ನು ಜಾರಿಗೆ ತರಲು ಮುಂದಾಗಿತ್ತು. ಇದಕ್ಕೆ ಹಿರಿಯ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಕ್ಕಟ್ಟಿನಿಂದಾಗಿ ಮುಂಬರುವ ಬಾಂಗ್ಲಾದೇಶ ಮತ್ತು ಭಾರತ ಪ್ರವಾಸಗಳ ಮೇಲೂ ಪರಿಣಾಮ ಬೀರಬಹುದು. ಅಲ್ಲದೇ ಆ್ಯಷಸ್ ಸರಣಿಗೂ ತೊಂದರೆಯಾಗುವ ಆತಂಕ ಎದುರಾಗಿದೆ. ಇನ್ನು ಆಟಗಾರರು ಒಪ್ಪಂದಕ್ಕೆ ಸಹಿ ಹಾಕುವವರೆಗೂ ಆದಾಯವನ್ನು ಕೆಳ ಹಂತದ ಕ್ರಿಕೆಟ್ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

Comments

comments

LEAVE A REPLY

Please enter your comment!
Please enter your name here