ಕೋಚ್ ದ್ರಾವಿಡ್‌ಗೆ ಶೇ.100ರಷ್ಟು ವೇತನ ಹೆಚ್ಚಳ: ವಾರ್ಷಿಕ 5 ಕೋಟಿಗೆ ಏರಿಕೆ

0
ಚೆನ್ನೈ: ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮುಂದಿನ ಎರಡು ವರ್ಷದವರೆಗೆ ಭಾರತ ‘ಎ’ ಹಾಗೂ ಅಂಡರ್ 19 ತಂಡಕ್ಕೂ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದ್ರಾವಿಡ್ ಕೋಡ್ ಆಗಿ ಮುಂದುವರಿಕೆಗೆ ಅಧಿಕೃತ ಮುದ್ರೆ ಒತ್ತಿದೆ. ಇನ್ನು ದ್ರಾವಿಡ್ ರವರಿಗೆ ಶೇಖಡ 100ರಷ್ಟು ವೇತನ ಹೆಚ್ಚಳ ಮಾಡಿದ್ದು ವಾರ್ಷಿಕ 5 ಕೋಟಿ ವೇತನ ಪಡೆಯಲಿದ್ದಾರೆ.
2015 ರಲ್ಲಿ ಟೀಂ ಇಂಡಿಯಾ ‘ಎ’ ಹಾಗೂ ಅಂಡರ್ 19 ತಂಡಕ್ಕೂ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದರು. ಈಗ ಅವರನ್ನು ಮತ್ತೆ ಎರಡು ವರ್ಷ ಮುಂದುವರೆಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಪ್ರಸ್ತಾವನೆಗೆ ಬಿಸಿಸಿಐ ಒಪ್ಪಿಗೆ ಸೂಚಿಸಿತ್ತು.
ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತೀಯ ಕ್ರಿಕೆಟ್ ತಂಡದ ಎ ವಿಭಾಗ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಜಯಗಳಿಸಿತ್ತು. ಅಷ್ಟೇ ಅಲ್ಲದೇ ಯು-19 ತಂಡ ಸಹ ದ್ರಾವಿಡ್ ಮಾರ್ಗದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಅವರ ಸೇವೆಯನ್ನು ಮತ್ತೆ ಎರಡು ವರ್ಷಗಳು ಪಡೆಯಲು ಬಯಸುತ್ತೇವೆ ಎಂದು ಬಿಸಿಸಿಐ ತಿಳಿಸಿದೆ.

Comments

comments

LEAVE A REPLY

Please enter your comment!
Please enter your name here