ಎಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ 499 ರೂ.ಗೆ ‘ಮೊಟೊ ಸಿ ಪ್ಲಸ್’ ಸ್ಮಾರ್ಟ್‌ಫೋನ್!!

0

ಇತ್ತೀಚಿಗೆ ಬಿಡುಗಡೆಯಾದ ಬಜೆಟ್ ಸ್ಮಾರ್ಟ್‌ಫೋನ್ ‘ಮೊಟೊ ಸಿ ಪ್ಲಸ್’ ಭಾರಿ ಆಫರ್‌ನಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕಿದೆ.!! ಲೆನೊವೊ ಒಡೆತನದ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೊನ್ ಮೇಲೆ ಭಾರಿ ಎಕ್ಸ್‌ಚೇಂಜ್ ಆಫರ್ ನೀಡಿದ್ದು, ಶೇ 90 ಪರ್ಸೆಂಟ್‌ನಷ್ಟು ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.!!

6999 ರೂಪಾಯಿ ಬೆಲೆ ಹೊಂದಿರುವ ಸ್ಮಾರ್ಟ್‌ಫೋನ್ ಮೇಲೆ 6,500 ರೂಪಾಯಿಗಳ ಭಾರಿ ಎಕ್ಸ್‌ಚೇಂಜ್ ಆಫರ್ ಇದ್ದು, ಹಳೆಯ ಮೊಬೈಲ್ ನೀಡಿ ಕೇವಲ 499 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಿ.!  ಹಾಗಾದರೆ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನ್ ವಿಶೇಷತೆ ಏನು? ಬೆಲೆಗೆ ತಕ್ಕ ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮೊಟೊ ಸಿ ಪ್ಲಸ್ ಡಿಸ್‌ಪ್ಲೇ ಮತ್ತು ಪ್ರೊಸೆಸರ್ !! ಮೊಟೊ ಸಿ ಪ್ಲಸ್ 5ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 1280*720 ರೆಸಲ್ಯುಷನ್ ಹೊಂದಿದೆ. ಇನ್ನು 64 ಬಿಟ್ ಕ್ವಾಡ್‌ಕೋರ್ ಮಿಡಿಯಾಟೆಕ್ ಪ್ರೊಸೆಸರ್ ಹೊಂದಿದೆ.!!

RAM ಮತ್ತು ಮೆಮೊರಿ ಎಷ್ಟು? ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, 1GB RAM ಮತ್ತು 2GB RAM ಹಾಗೂ 16GB ಮೆಮೊರಿಯನ್ನು ಹೊಂದಿದೆ.!!

ಕ್ಯಾಮೆರಾ ಹೇಗಿದೆ.!! ಕೇವಲ 8MP ರಿಯರ್ ಕ್ಯಾಮೆರಾ ಹಾಗೂ 2MP ಸೆಲ್ಫಿ ಕ್ಯಾಮೆರಾನ್ನು ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿದೆ.!! ಹಾಗಾಗಿ, ಕ್ಯಾಮೆರಾ ಗುಣಮಟ್ಟದಲ್ಲಿ ಭಾರಿ ಹಿಂದುಳಿದಿದೆ ಎನ್ನಬಹುದು.!!

ಬ್ಯಾಟರಿ ಮತ್ತು ಬೆಲೆ ಎಷ್ಟು? ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಹೊಂದಿರುವ ಅತ್ಯುತ್ತಮ ಫೀಚರ್ ಎಂದರೆ 4000mAh ಬ್ಯಾಟರಿ.! ಆದರೂ ಸಹ ಕೊಡುವ ಬೆಲೆಗೆ ಅಷ್ಟೇನು ಉತ್ತಮ ಸ್ಮಾರ್ಟ್‌ಫೋನ್ ಅಲ್ಲ ಎಂದು ಹೇಳಬಹುದು.!!

Comments

comments

LEAVE A REPLY

Please enter your comment!
Please enter your name here