ಫೇಸ್ ಬುಕ್ ನಿಂದ ಗ್ರೂಪ್ ಬಳಕೆದಾರರಿಗೆ ಹೊಸ ಆಯ್ಕೆ..!!

0

ಫೇಸ್ ಬುಕ್ ಇದೇ ಮೊದಲ ಬಾರಿಗೆ ಕಮ್ಯೂನಿಟಿ ಸಮಾವೇಶವನ್ನು ಚಿಕಾಗೋದಲ್ಲಿ ನಡೆಸಿದ್ದು, ಈ ಸಮಾವೇಶದಲ್ಲಿ ನೂರಾರು ಸಂಖ್ಯೆಯ ಗ್ರೂಪ್ ಆಡ್ಮಿನ್ ಗಳು ಭಾಗಿಯಾಗಿದ್ದಲ್ಲದೇ, ಇದೇ ಸಂದರ್ಭದಲ್ಲಿ ಫೇಸ್ ಬುಕ್ ಹೊಸದಾಗಿ ಅನೇಕ ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡಿದೆ.

ಗ್ರೂಪ್ ಆಡ್ಮಿನ್ ಗಳೊಂದಿಗೆ ಮಾತುಕತೆಯನ್ನು ನಡೆಸಿದ ಮಾರ್ಕ್ ಜುಕರ್ಬಗ್, ಗ್ರೂಪ್ ಕಮ್ಯೂನಿಟಿಗಳ ಸಹಾಯದಿಂದಲೇ ಇನಷ್ಟು ಜನರನ್ನು ತಲುಪುವ ಕೆಲಸವನ್ನು ಮಾಡಲು ಗ್ರೂಪ್ ಗಳ ಸಹಾಯವನ್ನು ಪಡೆಯಲು ಫೇಸ್ ಬುಕ್ ಮುಂದಾಗಿದೆ. ಇದಕ್ಕಾಗಿಯೆ ಹೊಸ ಆಯ್ಕೆಗಳನ್ನು ನೀಡಲು ಫೇಸ್ ಬುಕ್ ಮುಂದಾಗಿದೆ.

ಗ್ರೂಪ್ ಇನ್ಸೈಟ್ಸ್: ಇದು ಗ್ರೂಪ್ ಆಡ್ಮಿನ್ ಗಳಿಗೆ ರಿಯಲ್ ಟೈಮ್ ಮಾಹಿತಿಯನ್ನು ನೀಡಲಿದೆ. ಗ್ರೂಪ್ ಬೆಳವಣಿಗೆ, ಎನ್ಗೇಮ್ ಮೆಂಟ್ ಗಳನ್ನು ಮೆಂಬರ್ ಗಳ ಸಂಖ್ಯೆ ಕುರಿತ ಸಂಫೂರ್ಣ ಮಾಹಿತಿಯನ್ನು ನೀಡಲಿದೆ.

ಮೆಂಬರ್ ಶಿಪ್ ರಿಕ್ವೆಸ್ಟ್: ಇದೇ ಮೊದಲ ಬಾರಿಗೆ ಗ್ರೂಪ್ ಆಡ್ಮಿನ್ ಗಳು ಮೆಂಬರ್ ಶಿಪ್ ಗಳನ್ನು ಫಿಲ್ಟರ್ ಮಾಡಬಹುದಾಗಿದೆ. ಅಲ್ಲದೇ ಜೆಂಡರ್, ಲೋಕೆಷನ್ ಮತ್ತು ಮುಂತಾದವುಗಳ ಆಧಾರ ಮೇಲೆ ರಿಕ್ವೆಸ್ ಆಕ್ಸೆಪ್ ಮಾಡಿಕೊಳ್ಳಬಹುದಾಗಿದೆ.

ರಿಮೂವ್ಡ್ ಮೆಂಬರ್: ಇದಲ್ಲದೇ ಕೆಲವು ಸಮಯಗಳಲ್ಲಿ ಆಡ್ಮಿನ್ ಗಳು ಕಮ್ಯೂನಿಟಿಯನ್ನು ಸೆಫ್ ಆಗಿಡಲು ಮೆಂಬರ್ ಗಳನ್ನು ಡಿಮೂವ್ಡ್ ಮಾಡಬೇಕಾಗಿದೆ. ಇದಲ್ಲದೇ ಪೋಸ್ಟ್, ಕಾಮೆಂಟ್ ಮತ್ತು ಮುಂತಾದವುಗಳನ್ನು ತೆಗೆಯಲು ಇದು ಸಹಾಯಕಾರಿಯಾಗಿದೆ.

ಶೆಡ್ಯೂಲ್ಡ್ ಪೋಸ್ಟ್: ಇದಲ್ಲದೇ ಫೆಸಿಫಿಕ್ ಡೇ ಮತ್ತು ಟೈಮ್ ನಲ್ಲಿ ಗ್ರೂಪ್ ಆಡ್ಮಿನ್ ಗಳು ಫೋಸ್ಟ್ ಗಳನ್ನು ಶೆಡ್ಯೂಲ್ಡ್ ಮಾಡಲು ಇದು ಸಹಾಯಕಾರಿಯಾಗಿದೆ.

ಗ್ರೂಪ್ ಗ್ರೂಪ್ ಲಿಂಕ್: ಇದಕ್ಕದೇ ಫೇಸ್ ಬುಕ್ ಗ್ರೂಪ್ ಮತ್ತು ಗ್ರೂಪ್ ನಡುವೆ ಲಿಂಕಿಂಗ್ ಮಾಡಲು ಇದು ಬಹಳ ಸಹಾಯಕಾರಿಯಾಗಿದೆ. ಇದಲ್ಲದೇ ಇದು ತನ್ನ ಮೆಂಬರ್ ಗಳಿಗೆ ಬೇರೆ ಗ್ರೂಪ್ ಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ. ಈ ಎಲ್ಲಾ ಅಂಶಗಳು ಫೇಸ್ ಬುಕ್ ಗ್ರೂಪ್ ಗಳನ್ನು ಇನಷ್ಟು ಬಳಕೆದಾರರ ಬಳಿಗೆ ತೆಗೆದುಕೊಂಡು ಹೋಗುವುದಲ್ಲದೇ ಫೇಸ್ ಬುಕ್ ಖ್ಯಾತಿಯನ್ನು ಇನಷ್ಟು ಏರಿಸಲಿದೆ.

Comments

comments

LEAVE A REPLY

Please enter your comment!
Please enter your name here