ಜಿಎಸ್‌ಟಿ ಎಫೆಕ್ಟ್: ಮೈದಾನದಲ್ಲಿ ಐಪಿಎಲ್ ಪಂದ್ಯ ನೋಡುವ ಅಭಿಮಾನಿಗಳೂ ತೆರಬೇಕು ಭಾರಿ ಮೊತ್ತ

0
ನವದೆಹಲಿ: ಜುಲೈ 1ರಂದು ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಾಗಲಿದ್ದು ಇದರ ಪರಿಣಾಮ ಕ್ರೀಡಾ ಕ್ಷೇತ್ರದ ಮೇಲೂ ಬೀರಲಿದೆ.
ಐಪಿಎಲ್ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಅಭಿಮಾನಿಗಳು ಮೈದಾನಕ್ಕೆ ತೆರಳಿ ಪಂದ್ಯ ನೋಡಿದಲ್ಲಿ ಶೇಕಡ 28ರಷ್ಟು ತೆರಿಗೆ ಪಾವತಿಸಬೇಕಿದೆ. ಐಪಿಎಲ್ ರೀತಿಯ ಮನರಂಜನೆ ಕ್ರೀಡೆಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸಲಾಗಿದೆ.
ಇನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಹಾಕಿ ಫೆಡರೇಷನ್ ಮೊದಲಾದ ಸಂಸ್ಥೆಗಳು ಆಯೋಜಿಸುವ ಕ್ರೀಡೆಗಳಿಗೆ ಶೇ.18ರಷ್ಟು ತೆರಿಗೆ ಪಾವತಿಸಬೇಕಿದೆ.
ಇನ್ನು ಅಲ್ಪಮೊತ್ತದ 250 ರುಪಾಯಿಗಿಂತ ಕಡಿಮೆ ಬೆಲೆಯ ಟಿಕೆಟ್ ಗಳಿಗೆ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮೊದಲಾದವುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

Comments

comments

LEAVE A REPLY

Please enter your comment!
Please enter your name here